ನಟ ದಿಲೀಪ್ ರಾಜ್ ಸಾವು: ಬೆಳಗ್ಗೆ ಎದ್ದ ತಕ್ಷಣ ಮಾಡುವ ತಪ್ಪು ಶೇ.80ರಷ್ಟು ಹೃದಯಾಘಾತಕ್ಕೆ ಕಾರಣ? ತಜ್ಞರು ಹೇಳೋದೇನು? ಬೆಂಗಳೂರು: ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಹಠಾತ್ ಮರಣದ ಬಳಿಕ ಮತ್ತೆ ಹೃದಯಾಘಾತದ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಇದೇ ಸಂದರ್ಭದಲ್ಲೇ ವಾಟ್ಸಪ್ ಮತ್ತು ರೀಲ್ಸ್ ಗಳಲ್ಲಿ ಈ ಬಗ್ಗೆ ಸಾಕಷ್ಟು ವೈರಲ್ ಮಾಹಿತಿಗಳು ಹರಿದಾಡುತ್ತಿವೆ. ಆನ್ಲೈನ್ನಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿದ್ದು, ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಕೆಲ ಸಲಹೆಗಳನ್ನೂ ನೀಡಲಾಗುತ್ತಿದೆ. ಈ ಪಟ್ಟಿಗೆ "ಬನಕೋಮಾ ಓನಾಕೋ" ಎಂಬ ಜಪಾನೀಸ್ ಹೃದಯ ತಜ್ಞರ ಸಲಹೆ ಕೂಡ ಸೇರಿದ್ದು, ಹೀಗೆ ಆನ್ಲೈನ್ ನಲ್ಲಿ ಹರಿದಾಡುತ್ತಿರುವ ಈ ಸಂದೇಶಗಳು ತಪ್ಪು ದಾರಿ ಹಿಡಿಸುವಂತಿದ್ದು, ವೈದ್ಯಕೀಯವಾಗಿ ದೃಢೀಕರಿಸಲ್ಪಟ್ಟಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. "ಬನಕೋಮಾ ಓನಾಕೋ" ಎಂಬ ಜಪಾನೀಸ್ ಹೃದಯ ತಜ್ಞರು ನೀಡಿದ್ದಾರೆ ಎಂದು ಹೇಳಲಾದ ಹೇಳಿಕೆಗಳು ಇದೀಗ ಆನ್ಲೈನ್ ನಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಅವರೇ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲ. ಪ್ರಸ್ತುತ ವೈರಲ್ ಆಗಿರುವ ಸಂದೇಶಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಮನುಷ್ಯರು ಮಾಡುವ ಒಂದು ಕಾರ್ಯವನ್ನು ಉಲ್ಲೇಖಿಸಲಾಗಿದೆ. ಇದರಿಂದಲೇ ಹೆಚ್ಚಿನ ಪ್ರಮಾಣದ ಹೃದಯಾಘಾತಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯಪಡಲಾಗಿದೆ. ಸಾಮಾನ್ಯವಾಗಿ ಬಹುತೇಕ ಮಂದಿ ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಎದ್ದು ನಿಂತುಕೊಳ್ಳುತ್ತಾರೆ. ಇದರಿಂದ ಹೃದಯಾಘಾತಗಳು ಸಂಭವಿಸುತ್ತವೆ ಎಂದು ಹೇಳಲಾಗಿದೆ. ಆದರೆ ತಜ್ಞರು ಇದಕ್ಕೆ ವೈಜ್ಞಾನಿಕ ಸಾಕ್ಷ್ಯವಿಲ್ಲ ಎಂದು ಹೇಳಿದ್ದಾರೆ. ಹೃದಯ ವೈದ್ಯಕೀಯ ಸಂಶೋಧನೆಗಳು "80% ಹೃದಯಾಘಾತಗಳು ಒಂದು ಬೆಳಗಿನ ತಪ್ಪಿನಿಂದ ಆರಂಭವಾಗುತ್ತವೆ" ಎಂಬ ಹೇಳಿಕೆಯನ್ನು ಸಮರ್ಥಿಸುವುದಿಲ್ಲ. ಆದರೂ, ಶಾಂತವಾಗಿ ಎದ್ದುಕೊಳ್ಳುವುದು ಸಾಮಾನ್ಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಅಭ್ಯಾಸವಾಗಬಹುದು. ನಿಧಾನವಾದ ಬೆಳಗಿನ ರೊಟೀನ್ ಕೆಲವರಿಗೆ ತಲೆ ಸುತ್ತುವ ಅನುಭವ ಹೊಂದಬಹುದು ಅಥವಾ ಒತ್ತಡ ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಇದನ್ಷ್ಯಾನಿಕವಾಗಿ ಹೃದಯಾಘಾತ ತಡೆಯುವ ವಿಧಾನವೆಂದು ಹೇಳುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ. ಕೆಲವು ಸಂದರ್ಭಗಳಲ್ಲಿ ವೈದ್ಯರು ವಿಶೇಷವಾಗಿ ವಯೋವೃದ್ಧರು ಅಥವಾ ತಲೆ ಸುತ್ತುವ ಸಮಸ್ಯೆಯಿರುವವರಿಗೆ ನಿಂತುಕೊಳ್ಳುವ ಮೊದಲು ನಿಧಾನವಾಗಿ ಕುಳಿತುಕೊಳ್ಳಲು ಸಲಹೆ ನೀಡುತ್ತಾರೆ. ಆದರೆ ಅದು "ಹಠಾತ್ ಎದ್ದು ನಿಲ್ಲುವುದು ಬಹುತೇಕ ಹೃದಯಾಘಾತಗಳಿಗೆ ಕಾರಣ" ಎನ್ನುವ ಹೇಳಿಕೆಯಿಂದ ಸಂಪೂರ್ಣ ಭಿನ್ನವಾಗಿದೆ.#bangalore #heart_attack #dilip_raj #japanese_experts #online_viral
